ಸಕ್ಕರೆ - 
	ರಸಾಯನವಿe್ಞÁನದ ಪರಿಭಾಷೆಯಲ್ಲಿ ಕಾರ್ಬೊಹೈಡ್ರೇಟುಗಳ ವರ್ಗಕ್ಕೆ ಸೇರಿದ ಏಕ, ದ್ವಿ ಮತ್ತು ತ್ರಿಸ್ಯಾಕರೈಡುಗಳ ಸರ್ವನಾಮ (ಶುಗರ್). ವ್ಯವಹಾರದಲ್ಲಿ ಕಬ್ಬಿನಿಂದ ಅಥವಾ ಬೀಟ್‍ಗೆಡ್ಡೆಯಿಂದ ತಯಾರಿಸಿದ ಸುಕ್ರೋಸ್ ಅಥವಾ ಸ್ಯಾಕರೋಸ್ ಎಂಬ ದ್ವಿಸ್ಯಾಕರೈಡನ್ನು ಸಕ್ಕರೆ ಎನ್ನುತ್ತೇವೆ. ಮಾಲ್ಟೋಸ್ (ಮಾಲ್ಟ್ ಸಕ್ಕರೆ) ಮತ್ತು ಲ್ಯಾಕ್ಟೋಸ್ ಗಳೂ (ಹಾಲಿನ ಸಕ್ಕರೆ) ಇದೇ ವರ್ಗದವು. ಇವೆಲ್ಲವುಗಳ ಸಾಮಾನ್ಯ ಸಂಯೋಜನಾ ಸೂತ್ರ: ಅ12ಊ22ಔ11. ದ್ವಿಸ್ಯಾಕರೈಡ್ ಸಕ್ಕರೆಗಳನ್ನು ಎರಡು ಏಕಸ್ಯಾಕರೈಡ್ ಹೆಕ್ಸೋಸ್ ಸಕ್ಕರೆಗಳಾಗಿ ಜಲವಿಭಜಿಸಬಹುದು (ಉದಾ: ಮಾಲ್ಟೋಸ್-ಗ್ಲೂಕೋಸಿನ ಎರಡು ಅಣುಗಳು, ಲ್ಯಾಕ್ಟೋಸ್-ಗ್ಲೂಕೋಸ್ ಮತ್ತು ಗ್ಯಾಲಕ್ಟೋಸ್, ಸುಕ್ರೋಸ್-ಗ್ಲೂಕೋಸ್ ಮತ್ತು ಫ್ರಕ್ಟೋಸ್). ಒಂದು ಅಣು ಏಕಸ್ಯಾಕರೈಡ್ ಸಕ್ಕರೆಯಲ್ಲಿ ಎಷ್ಟು ಕಾರ್ಬನ್ ಪರಮಾಣು ಗಳಿವೆ ಎಂಬುದನ್ನು ಆಧರಿಸಿ ನಾಮಕರಣ ಮಾಡುವುದುಂಟು (ಉದಾ: ಪೆಂಟೋಸ್, ಹೆಕ್ಸೋಸ್, ಹೆಪ್ಟೋಸ್). ಏಕಸ್ಯಾಕರೈಡ್ ಸಕ್ಕರೆಗಳ ಪೈಕಿ ಹೆಕ್ಸೋಸ್ (ಸಾಮಾನ್ಯ ಸಂಯೋಜನಾ ಸೂತ್ರ: ಅ6ಊ12ಔ6) ವ್ಯಾಪಕವಾಗಿ ಲಭ್ಯ. ಪ್ರತಿಯೊಂದು ಹೆಕ್ಸೋಸ್ ಎರಡು ರೂಪಗಳಲ್ಲಿ ಲಭ್ಯ: ದಕ್ಷಿಣಾವರ್ತಕ (ಡೆಕ್ಸ್ಟ್ರೊರೊಟೇಟರಿ) ಮತ್ತು ವಾಮಾವರ್ತಕ (ಲ್ಯಾವೊರೊಟೇಟರಿ). ದಕ್ಷಿಣಾವರ್ತಕ ಹೆಕ್ಸೋಸಿನ ದ್ರಾವಣಗಳು ಧ್ರುವೀಕೃತ ಬೆಳಕಿನ ತಲವನ್ನು ಪ್ರದಕ್ಷಿಣ ದಿಶೆಯಲ್ಲಿಯೂ ವಾಮಾವರ್ತಕ ದವು ಅಪ್ರದಕ್ಷಿಣ ದಿಶೆಯಲ್ಲಿಯೂ ಆವರ್ತಿಸುತ್ತವೆ. ಪ್ರಾಣಿ ದೇಹದಲ್ಲಿ ದಕ್ಷಿಣಾವರ್ತಕ ಹೆಕ್ಸೋಸ್ ಮಾತ್ರ ಇದೆ. ಪ್ರಮುಖ ಹೆಕ್ಸೋಸುಗಳು: ಗ್ಲೂಕೋಸ್, ಗ್ಯಾಲಕ್ಟೋಸ್ ಮತ್ತು ಫ್ರಕ್ಟೋಸ್. ಮೊದಲ ಎರಡು ಆಲ್ಡಿಹೈಡುಗಳು, ಕೊನೆಯದು ಕೀಟೋನ್.

	ಎಲ್ಲ ಸಕ್ಕರೆಗಳ ಸಾಮಾನ್ಯ ಗುಣಗಳು-ನೀರಿನಲ್ಲಿ ಲೀನಿಸುತ್ತವೆ, ಸಾಮಾನ್ಯವಾಗಿ ಸ್ಫಟಿಕೀಕರಿಸಬಹುದು, ಬಣ್ಣ ಮತ್ತು ವಾಸನೆ ಇಲ್ಲ, ಹೆಚ್ಚುಕಡಿಮೆ ಸಿಹಿರುಚಿ. ಸುಕ್ರೋಸನ್ನು ಬಿಟ್ಟು ಉಳಿದ ಅನೇಕ ಪ್ರಮುಖ ಸಕ್ಕರೆಗಳು ಕ್ಷಾರೀಯ ದ್ರಾವಣದಲ್ಲಿ ಕ್ಯುಪ್ರಿಕ್ ಆಕ್ಸೈಡನ್ನು ಕ್ಯುಪ್ರಸ್ ಆಕ್ಸೈಡಾಗಿ ಅಪಕರ್ಷಿಸುತ್ತವೆ. ಮೂತ್ರ ಮತ್ತು ರಕ್ತ ಪರೀಕ್ಷೆಯಲ್ಲಿ ಈ ಗುಣದ ಉಪಯೋಗ ಉಂಟು. ಬಹುತೇಕ ಸಕ್ಕರೆಗಳು ಸಸ್ಯ ಮತ್ತು ಪ್ರಾಣಿ ಊತಕಗಳಲ್ಲಿ ವ್ಯಾಪಕವಾಗಿ ಲಭ್ಯ. 

	ಸುಕ್ರೋಸ್, ಗ್ಲೂಕೋಸ್, ಲ್ಯಾಕ್ಟೋಸ್ ಮತ್ತು ಮಾಲ್ಟೋಸ್ ಬಲು ವ್ಯಾಪಕ ಬಳಕೆ ಇರುವ ವಾಣಿಜ್ಯಸಕ್ಕರೆಗಳು. ಅನೇಕ ಆಹಾರೋತ್ಪನ್ನ ಗಳ ಅನಿವಾರ್ಯ ಘಟಕ. ಕೆಲವು ಕಾರ್ಬನಿಕ ಸಂಯುಕ್ತಗಳ ತಯಾರಿಯಲ್ಲಿ ಕಚ್ಚಾಸಾಮಗ್ರಿಯಾಗಿಯೂ ಬಳಕೆ ಇದೆ. ಎಸ್ಟರ್ ಮತ್ತು ಈಥರುಗಳಾಗಿ ಇವನ್ನು ಪರಿವರ್ತಿಸಬಹುದು.	
              
    		 (ಎಸ್.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ